ಬ್ರೈಟನ ಕಾಯಿಲೆ 

	 ಮೈ ಕೈ ಊತ ಮತ್ತು ಮೂತ್ರದಲ್ಲಿ ಆಲ್ಬ್ಯುಮಿನ್ ಗಣನೀಯ ಪ್ರಮಾಣದಲ್ಲಿ ಇರುವ ಮೂತ್ರಜನಕಾಂಗಗಳ ರೋಗ. 1827ರಲ್ಲಿ ಈ ರೋಗದ ಬಗ್ಗೆ ರಿಚರ್ಡ್ ಬ್ರೈಟ್ ವಿವರಣೆ ನೀಡಿದ್ದರಿಂದ ಈ ಹೆಸರು. ಆದರೆ ಅನೇಕ ರೀತಿಯ ಮೂತ್ರ ಪಿಂಡರೋಗಗಳಿಗೆ ಈ ಲಕ್ಷಣಗಳು ಸಾಮಾನ್ಯ ಲಕ್ಷಣಗಳೆಂದು ತಿಳಿದದ್ದರಿಂದ ಶೀಘ್ರದಲ್ಲೇ ಬ್ರೈಟನ ಕಾಯಿಲೆ ಎನ್ನುವುದು ಏಕೈಕ ರೋಗವಲ್ಲ ಎಂಬ ಭಾವನೆ ಬೆಳೆಯಿತು. ವಿಷಯಜ್ಞಾನ ಮುಂದುವರಿದಂತೆ ಬ್ರೈಟನ ಕಾಯಿಲೆ ಎನ್ನುವ ಸ್ಥಿತಿ ವಾಸ್ತವವಾಗಿ ಕೋಳೆಮೂತ್ರ (ಅಲ್ಬ್ಯುಮಿನುರಿಯ) ಮೈ ಕೈ ಊತ ಮತ್ತು ಸಾಮಾನ್ಯವಾಗಿ ಏರಿದೊತ್ತಡ ಹಾಗೂ ಸ್ವತಃ ಮೂತ್ರಪಿಂಡಗಳ ವ್ಯಾಧಿಯಿಂದ ಕೂಡಿರುವ ರೋಗಲಕ್ಷಣಗಳ ಕೂಟ ಎನ್ನುವುದು ಸ್ಪಷ್ಟವಾಯಿತು. ಈ ರೋಗಲಕ್ಷಣಗಳಿರುವ ಬಹುಪಾಲು ರೋಗಿಗಳು ತೀವ್ರವಾದ ಗೊಂಡೆ ಮೂತ್ರಪಿಂಡದುರಿತ (ಗ್ಲೊಮೆನ್ಲೊಸಿಫ್ರೈಡಿಸ್) ಅಥವಾ ದೀರ್ಘಕಾಲಿಕ ಗೊಂಡೆ ಮೂತ್ರಪಿಂಡದುರಿತದಿಂದ ನರಳುತ್ತಾರೆ. ಇದು ಉಂಟುಮಾಡುವ ಇತರ ಕಾಯಿಲೆಗಳೆಂದರೆ ಹಿಟ್ಟಂದಮೂತ್ರಪಿಂಡಬೇನೆ (ಅಮೈಲಾಯಿಡ್ ನೆಫ್ರೊಸಿಸ್), ನಿಡುಗಾಲದ ಮೂತ್ರಪಿಂಡ ಗುಳಿಯುರಿತ (ಕ್ರಾನಿಕ್ ಪೈಲೊನೆಪ್ರೈಟಿಸ್) ವಿಷಮ ಏರೊತ್ತಡ ಮತ್ತು ಡಯಬೆಟಿಕ್ ಗೊಂಡೆ ಮೂತ್ರಪಿಂಡ ಪೆಡಸಣೆ. ಎಲ್ಲಿಸ್ ಮತ್ತು ಅವನ ಸಹೋದ್ಯೋಗಿಗಳು ಲಂಡನ್ ಆಸ್ಪತ್ರೆಯಲ್ಲಿ ಬ್ರೈಟನ ಕಾಯಿಲೆಯಿಂದ ನರಳುತ್ತಿದ್ದ 600ಮಂದಿ ರೋಗಿಗಳ ಲಕ್ಷಣಗಳನ್ನು ಪರಿಶೀಲಿಸಿದಾಗ ಇವುಗಳಲ್ಲಿ ಎರಡುವಿಧ, ಇರುವುದು ಕಂಡುಬಂದಿತು.
	1 ರಕ್ತಸ್ರಾವದ ನಮೂನೆ (ಹೆಮೊರ್ಯಾಜಿಕ್ ಟೈಪ್, ಟೈಪ್ Iನೆಯ ಫ್ರೈಟಿಸ್),
	2 ದದ್ದರಿಕನ ನಮೂನೆ (ಇಡಿಮಟಸ್ ಟೈಪ್, ಟೈಪ್ IIನೆಯ ಫ್ರೈಟಿಸ್).	(ಜಿ.ಎ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ